ಗುರುವಾರ , ಮಾರ್ಚ್ 28 2024
kn
Breaking News

ಕಂದಾಯ ಇಲಾಖೆಯ ನೌಕರರಿಗೆ ಅನ್ಯ ಇಲಾಖೆಯ ಕೆಲಸಕಾರ್ಯಗಳನ್ನು ವಹಿಸುತ್ತಿರುವುದನ್ನು ಕೂಡಲೇ ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ತಾಲೂಕು ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Spread the love

ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ರಾಮದುರ್ಗದ ತಹಶೀಲ್ದಾರ್ ಕಾರ್ಯಾಲಯದಲ್ಲಿ ದಿನಾಂಕ03/04/2021 ರಂದು ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘ ತಾಲೂಕು ಘಟಕ ರಾಮದುರ್ಗ ಇವರಿಂದ ಕಂದಾಯ ಇಲಾಖೆಯ ನೌಕರರಿಗೆ ಅನ್ಯ ಇಲಾಖೆಯ ಕೆಲಸಕಾರ್ಯಗಳನ್ನು ವಹಿಸುತ್ತಿರುವುದನ್ನು ಕೂಡಲೇ ಸ್ಥಗಿತಗೊಳಿಸುವಂತೆ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಕಂದಾಯ ಇಲಾಖೆ ರವರು ಮಾಡಿರುವ ಆದೇಶವನ್ನು ಪಾಲನೆ ಮಾಡಿ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳ ಹಿತ ಕಾಪಾಡುವಂತೆ ಕೋರಿ ಮಾನ್ಯ ತಹಶಿಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಕಂದಾಯ ಇಲಾಖೆ ಆದೇಶ ಸಂಖ್ಯೆ ಕಂಇ/175/2017 ದಿನಾಂಕ 31/03/2021ರಂದು 21/10/2020 ಹಾಗೂ 30/10/2017 ಈಗಾಗಲೇ ಕಂದಾಯ ಇಲಾಖೆಯಿಂದ ಹೊರಡಿಸಲಾದ ಸುತ್ತಲೆ ಗಳಿಗೆ ವ್ಯತಿರಿಕ್ತವಾಗಿ ಕೆಲಸಕಾರ್ಯಗಳನ್ನು ಹೇರುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘವು ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗುತ್ತದೆ.

ಕಂದಾಯ ಇಲಾಖೆ ಪೂರ್ವಾನುಮತಿ ಇಲ್ಲದೆ ವಹಿಸುವ ಅನ್ಯ ಇಲಾಖೆಗಳ ಕೆಲಸಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ಕಂದಾಯ ಇಲಾಖೆಯ ಕ್ಷೇತ್ರಮಟ್ಟದ ಗ್ರಾಮಲೆಕ್ಕಾಧಿಕಾರಿ ಗಳನ್ನು ಅವರ ನಿಯುಕ್ತಿಗೊಳಿಸದ ಸ್ಥಳದಿಂದ ವಿವಿಧ ಕಾರಣಗಳಿಂದ ಕಚೇರಿಗಳಿಗೆ ಅನ್ಯ ಕರ್ತವ್ಯದ ಮೇಲೆ ನಿಯೋಜಿಸ ಬಾರದೆಂದು ಅತ್ಯಗತ್ಯ ಸಂದರ್ಭಗಳನ್ನು ಹೊರತುಪಡಿಸಿ ರಜಾದಿನಗಳಲ್ಲಿ ಕಂದಾಯ ಇಲಾಖೆ ವತಿಯಿಂದ ಹೊರಡಿಸಲಾದ ಕಂಇ/175/2017 ದಿನಾಂಕ 30 10/ 2017 ಹಾಗೂ 21/10/2020ರ ಸರ್ಕಾರದ ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ದಿನಾಂಕ 31/03/2021ರಂದು ಆದೇಶ ಮಾಡಿರುತ್ತಾರೆ.

ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಆದೇಶದಂತೆ

ಕಂದಾಯ ಇಲಾಖೆಯ ಪೂರ್ವಾನುಮತಿ ಇಲ್ಲದೆ ಬಯಸುವ ಎಲ್ಲಾ ಅನ್ಯ ಇಲಾಖೆಗಳ ಕೆಲಸಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ಕೋರಿದೆ.

ಕಂದಾಯ ಇಲಾಖೆಯ ಕ್ಷೇತ್ರಮಟ್ಟದ ಗ್ರಾಮ ಲೆಕ್ಕಾಧಿಕಾರಿ ಗಳನ್ನು ಅವರ ನಿಯುಕ್ತಿಗೊಳಿಸಿದ ಸ್ಥಳದಿಂದ ವಿವಿಧ ಕಾರಣಗಳಿಂದ ಕಚೇರಿಗಳಿಗೆ ಅನ್ಯ ಕರ್ತವ್ಯದ ಮೇಲೆ ನಿಯೋಜಿಸಿರುವ ಗ್ರಾಮ ಲೆಕ್ಕಾಧಿಕಾರಿ ಗಳನ್ನು ಕೂಡಲೇ ಅವರ ಮೂಲ ವೃತ್ತಗಳಿಗೆ ಬಿಡುಗಡೆ ಮಾಡುವಂತೆ ಕೋರಿದೆ.

ಅತ್ಯಗತ್ಯ ಸಂದರ್ಭಗಳನ್ನು (ಉದಾ: ಚುನಾವಣೆ ಹಾಗೂ ಪ್ರಕೃತಿ ವಿಕೋಪ) ಹೊರತುಪಡಿಸಿ ರಜಾದಿನಗಳಲ್ಲಿ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳು ಸರ್ಕಾರಿ ಕೆಲಸ ವಹಿಸುವುದನ್ನು ನಿಲ್ಲಿಸುವಂತೆ ಕೋರಿದೆ.

ದಿನಾಂಕ 28/03/2021 ರಂದು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಗ್ರಾಮ ಲೆಕ್ಕಿಗರಾದ ಶ್ರೀ ಮಂಜುನಾಥ ಮುಳಗುಂದ ಇವರು ಯಾವುದೇ ರೋಗವಿಲ್ಲದೆ ಆರೋಗ್ಯವಾಗಿ ಇದ್ದಂತಹ ವ್ಯಕ್ತಿ ಅಧಿಕ ಕೆಲಸಗಳ ಒತ್ತಡದಿಂದ ಮೆದುಳು ನಿಷ್ಕ್ರಿಯಗೊಂಡು ಆಗಿ ಮರಣ ಹೊಂದಿರುತ್ತಾರೆ. ಈ ವಿಷಯವು ರಾಜ್ಯದ್ಯಂತ ಕಂದಾಯ ಇಲಾಖೆಯ ಬಗ್ಗೆ ಕೆಟ್ಟ ಸಂದೇಶವು ರವಾಸಿ ಆಗುತ್ತಿರುವುದನ್ನು ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಮನಗಂಡು ಕಂದಾಯ ಇಲಾಖೆಯ ನೌಕರರು ಮತ್ತು ಲೆಕ್ಕಾಧಿಕಾರಿಗಳಿಗೆ ಈ ರೀತಿಯ ಅವಗಡಗಳು ಮುಂದೆ ಸಂಭವಿಸದಂತೆ ತಡೆಯಲು ಒತ್ತಡಕ್ಕೆ ಒಳಗಾಗಿ ಕೆಲಸ ನಿರ್ವಹಿಸದಂತೆ ಮುಕ್ತ ವಾತಾವರಣ ಕಲ್ಪಿಸುವ ಹಿತದೃಷ್ಟಿಯಿಂದ ಮಾನ್ಯರು ಉಲ್ಲೇಖದ ರೀತ್ಯಾ ಆದೇಶಿಸಿರುತ್ತಾರೆ.

ಹಾಗೂ ಈಗಾಗಲೇ ಕಂದಾಯ ಇಲಾಖೆಯ ಪೂರ್ವಾ ನುಮತಿಯನ್ನು ಪಡೆಯದೆ ಜಾರಿಗೊಳಿಸುತ್ತಿರುವ ಕೆಲವು ಅನ್ಯ ಇಲಾಖೆಯ ಕೆಲಸವನ್ನು ಸ್ಥಗಿತಗೊಳಿಸಬೇಕೆಂದು ಕೋರಿದೆ. ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಒಂದು ಯೋಜನೆಯ ಕೆಲಸ ಪೂರ್ಣಗೊಂಡ ನಂತರ ಮತ್ತೊಂದು ಯೋಜನೆಯ ಕೆಲಸವನ್ನು ನಿರ್ವಹಿಸಲು ಸಾಕಷ್ಟು ಕಾಲಾವಕಾಶವನ್ನು ನೀಡಿ ಅನುಷ್ಠಾನಗೊಳಿಸುವ ಮೂಲಕ ಗ್ರಾಮಲೆಕ್ಕಾಧಿಕಾರಿಗಳ ಮೇಲಿನ ಅಧಿಕ ಒತ್ತಡವನ್ನು ಕಡಿಮೆ ಮಾಡಿ ಮುಕ್ತವಾಗಿ ಕರ್ತವ್ಯ ನಿರ್ವಹಿಸುವ ವಾತಾವರಣವನ್ನು ನಿರ್ಮಿಸಿ ಗ್ರಾಮ ಲೆಕ್ಕಾಧಿಕಾರಿಗಳ ಆರೋಗ್ಯ ಹಿತವನ್ನು ಕಾಪಾಡಲು ಈ ಮೂಲಕ ಸಮಸ್ತ ಗ್ರಾಮಲೆಕ್ಕಾಧಿಕಾರಿಗಳ ಪರವಾಗಿ ಕೋರಿದೆ.

ವರದಿ :ಶ್ರೀಕಾಂತ್ ಪೂಜಾರ್ ರಾಮದುರ್ಗ.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page