ಗುರುವಾರ , ಮಾರ್ಚ್ 28 2024
kn
Breaking News

ಸುಕ್ಷೇತ್ರ ಬಂಡಿಗಣಿ ಶ್ರೀಮಠದಿಂದ ಅನ್ನದಾಸೋಹ ಕಾರ್ಯಕ್ರಮ

Spread the love

ಮುಗಳಖೋಡ: ಪ್ರಪಂಚವನ್ನೇ ಬೆಚ್ಚಿಳಿಸಿರುವ ಕಿಲ್ಲರ ಕೊರೊನಾ ರೋಗ ದಿನದಿಂದ ದಿನಕ್ಕೆ ದೇಶದಲ್ಲಿ ತನ್ನ ಅಟ್ಟಹಾಸವನ್ನು ಮುಂದುವೆರೆಸಿದೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿ ಇದ್ದು, ಇದರಿಂದಾಗಿ ಕೂಲಿಕಾರ್ಮಿಕ, ಅಲೇಮಾರಿ ಜನಾಂಗ, ಬಡಕುಟುಂಟುಗಳ ಪರಿಸ್ಥಿತಿ ಅದೋಗತಿಯಾಗಿ ಜೀವಿಸಲು ಒಂದು ಹೊತ್ತು ಆಹಾರಕ್ಕೂ ಹುಡುಕಾಡುವಂತಾಗಿದೆ. ಇಂತಹ ಸಮಯದಲ್ಲಿ ಅನ್ನದಾನ ಮಹಾದಾನ ಪರಮದಾನ ಎಂಬಂತೆ ಯಾವ ಯಾವ ಊರುಗಳಲ್ಲಿ ಬಡಕುಟುಂಬ, ಕೂಲಿಕಾರ್ಮಿಕ ಹಾಗೂ ಅಲೇಮಾರಿ ಜನಾಂಗದವರು ಇರೂವರೋ ಅಲ್ಲಿಗೆ ಹೋಗಿ ಶ್ರೀಮಠದಿಂದ ಅನ್ನಪ್ರಸಾದ ತಯಾರಿಸಿ ನೂರಾರು ಜನರಿಗೆ ಅನ್ನದಾಸೋಹ ಮಾಡುವ ಕಾರ್ಯದಲ್ಲಿ ಶ್ರೀಮಠ ಭಕ್ತರು ತೊಡಗಿದ್ದಾರೆ.

SUBSCRIBE YOUTUBE CHANNEL

ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸುಕ್ಷೇತ್ರ ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ತ್ರಿಲೋಕಜ್ಞಾನಿ ಶ್ರೀ ಚಕ್ರವರ್ತಿ ಅನ್ನದಾನೇಶ್ವರರ ಮಠದಿಂದ ನಡೆಯುತ್ತಿರುವ ಅನ್ನದಾಸೋಹ ಕಾರ್ಯಕ್ರಮ.

ಶ್ರೀಮಠದಿಂದ ರಾಜ್ಯದ ವಿವಿಧ ಕಡೆಗಳಲ್ಲಿ ಹಲವಾರು ಗ್ರಾಮಗಳಲ್ಲಿ ಬಡ ಕುಂಟುಂಬಗಳಿಗೆ ಕೂಲಿಕಾರ್ಮಿಕರಿಗೆ ಅಲೇಮಾರಿ ಜನಾಂಗಗಕ್ಕೆ ಅನ್ನದಾಸೋಹವನ್ನು ನಡೆಸುವುದರ ಮೂಲಕ ಅವರಿಗೆ ಆಶಾಕಿರಣವಾಗಿ ನಿಂತಿದ್ದಾರೆ. ಇಂತಹ ಕಾರ್ಯಗಳು ದಿನಾಲೂ ಶ್ರೀ ಮಠದಿಂದ ನಡೆಯುತ್ತಿದ್ದು ಇಂದು ರವಿವಾರ ದಿ ೨೬ ರಂದು ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದ ಶ್ರೀ ವಿಠ್ಠಲ ಮಂದಿರದಲ್ಲಿ ಅನ್ನದಾಸೋಹ ಕಾರ್ಯಕ್ರಮ ಜರುಗಿತು.

ಈ ದಾಸೋಹ ಕಾರ್ಯಕ್ರಮದಲ್ಲಿ ಊರಿನ ಸುಮಾರು ೬೦೦ ಅಧಿಕ ಜನರು ಪಾಲ್ಗೊಳ್ಳುವುದರೊಂದಿಗೆ, ಆಶಾಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪೋಲಿಸ್ ಸಿಬ್ಬಂದಿ, ಪುರಸಭೆ ಸಿಬ್ಬಂದಿ ಗ್ರಾಮಲೇಕ್ಕಾಧಿಕಾರಿಗಳ ಕಾರ್ಯಾಲಯ ಸಿಬ್ಬಂದಿ ಮುಂತಾದವರು ಅನ್ನಪ್ರಸಾದ ಸೇವೆನೆ ಮಾಡಿದರು. ಈ ಅನ್ನದಾಸೋಹವು ಶ್ರೀಮಠದ ಭಕ್ತರಿಂದ ನೆರವೇರಿತು.

ಈ ಸಂದರ್ಭದಲ್ಲಿ ಶ್ರೀಮಠದ ಭಕ್ತರಾದ ಮಲ್ಲಪ್ಪ ಅಥಣಿ, ಸಿದ್ದಪ್ಪ ಅಂಗಡಿ, ಬಸವರಾಜ ಕುಲಿಗೋಡ, ಮುರಿಗೇಪ್ಪ ಮಾಲಗಾರ, ಪರಪ್ಪ ಅಂಗಡಿ, ಯಲ್ಲಾಲಿಂಗ ಕಾಪಸಿ, ಸುರೇಶ ಮರಿಚಂಡಿ, ಸಾಹಾದೇವ ಬಾಗೋಡಿ, ಲಕ್ಷ್ಮಣ ಹೊಸಟ್ಟಿ, ಹಣಮಂತ ದುರದುಂಡಿ, ಬಸಯ್ಯ ಹಿರೇಮಠ ಮುಂತಾದವರು ಈ ಅನ್ನದಾಸೋಹ ಭಕ್ತಿಯ ಸೇವೆಯಲ್ಲಿ ಭಾಗಿಯಾಗಿದ್ದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page