ಗುರುವಾರ , ಮಾರ್ಚ್ 28 2024
kn
Breaking News

ವಿತರಕರ ಪಾದ ಪೂಜೆ ಸಲ್ಲಿಸಿ ಪತ್ರಿಕಾ ವಿತರಕರ ದಿನಾಚರಣೆ ಆಚರಣೆ

Spread the love

ಮೂಡಲಗಿ: ಪತ್ರಿಕಾ ವಿತರಕರ ಪಾದ ಪೂಜೆಯನ್ನು ಮಾಡುವ ಮೂಲಕ ಮೂಡಲಗಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮೂಡಲಗಿ ತಾಲೂಕಾ ಘಟಕ ಹಾಗೂ ಮಾಧ್ಯಮ ವಿವಿಧ ಸಂoಘಟನೆಯವರು ಭಾನುವಾರ ಪತ್ರಿಕಾ ವಿತರಕರ ದಿನಾಚರಣೆಯನ್ನು ಇಡೀ ರಾಜ್ಯದಲ್ಲಿ ಮೊದಲ ಭಾರಿಗೆ ವಿಶೇಷ ಮಾದರಿಯಾಗಿ ಆಚರಿಸಿದರು.

ರವಿವಾರದಂದು ಪಟ್ಟಣದ ಪ್ರೆಸ್ ಕ್ಲಬ್ ಕಾರ್ಯಾಲಯದಲ್ಲಿ ಆಯೋಜಿಸಲಾದ ಪತ್ರಿಕಾ ವಿತರಕರ ದಿನಾಚಾರಣೆಯ ಕಾರ್ಯಕ್ರಮದ ಅಂಗವಾಗಿ ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ ಹಾಗೂ ಪತ್ರಿಕೆ ವಿತರಕ ಸಂಘದ ಅಧ್ಯಕ್ಷ ಶಿವಬಸು ಗಾಡವಿ ಅವರು ಪತ್ರಿಕಾ ವಿತರಕರ ಪಾದಗಳನ್ನು ನೀರಿನಿಂದತೊಳೆದು ಪೂಜೆಯನ್ನು ಸಲ್ಲಿಸಿ, ಅವರ ಪಾದಗಳಿಗೆ ಪುಷ್ಪಗಳನ್ನು ಅರ್ಪಿಸಿದರು. ನಂತರ ವಿತರಕರಿಗೆ ಸಿಹಿ ತಿನಿಸಿ ಶಾಲು, ಹೂಮಾಲೆ ಹಾಕಿ. ಪೆನ್, ನೋಟಬುಕ್‌ಗಳನ್ನು ಕಾಣಿಕೆಯಾಗಿ ನೀಡಿ ಸನ್ಮಾನಿಸಿ ಗೌರವಿಸಿದರು.

ಸಂಘದ ಅಧ್ಯಕ್ಷ ಕೃಷ್ಣಾ ಗಿರೆನ್ನವರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳ ಬೆಳವಣಿಗೆಗೆ ಪ್ರಮುಖ ಕಾರಣಿಕರ್ತರು ವಿತರಕರು ಹಾಗಾಗಿ ಅವರನ್ನು ನಾವೆಲ್ಲರೂ ಗೌರದಿಂದ ಪಾದ ಪೂಜೆ ಮಾಡುವ ಮೂಲಕ ಸತ್ಕಾರಿಸಿ ಗೌರವಿಸಿದ್ದೇವೆ. ಪ್ರತಿ ದಿನ ಬೆಳಕು ಹರಿಯುವ ಮುನ್ನ ಓದುಗರ ಮನೆಬಾಗಿಲಲ್ಲಿ ಪತ್ರಿಕೆ ಇರಬೇಕು ಎಂಬುದೊoದೇ ವಿತರಕರ ಲಕ್ಷ ಇರುತ್ತದೆ. ಕೊರೋನಾ ಕಾಲಘಟ್ಟದಲ್ಲಿ ಸಹ ವಿತರಕರು ಸೋಂಕಿನ ಆತಂಕದಲ್ಲಿಯೂ ಸಹ ತಮ್ಮ ಸುರಕ್ಷೆಯನ್ನು ಲೆಕ್ಕಿಸದೆ ನಿಭಾಯಿಸಿಕೊಂದು ಓದುಗರಿಗೆ ಸುದ್ದಿ ಪತ್ರಿಕೆಗಳನ್ನು ತಲುಪಿಸುವ ಕಾರ್ಯವನ್ನನು ಶ್ರದ್ಧೆಯಿಂದ ಮಾಡಿದ್ದಾರೆ ಎಂದರು.

ಹಿರಿಯ ಪತ್ರಕರ್ತರ ಬಾಲಶೇಖರ ಬಂದಿ ಹಾಗೂ ಸ್ಥಳೀಯ ಪತ್ರಕರ್ತರ ಸಂಘದ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಮಾತನಾಡಿ, ಮಳೆ, ಚಳಿ, ಬಿಸಿಲು ಎನ್ನದೆ ನಸುಕಿನಲ್ಲಿ ಪತ್ರಿಕೆಯನ್ನು ಓದುಗರ ಕೈಗೆ ತಲುಪಿಸುವ ಪತ್ರಿಕಾ ವಿತರಕರ ಪಾತ್ರ ಪತ್ರಿಕೋದ್ಯಮದಲ್ಲಿ ಮಹತ್ವದಾಗಿದೆ. ಕಾರ್ಮಿಕರಿಗೆ ನೀಡುವಂತೆ ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ, ಪ್ರತಿ ದಿನ ಓಡಾಡಲು ಸೈಕಲ್, ಗೌರವಧನ ಹೀಗೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಸರ್ಕಾರ ಪತ್ರಿಕಾ ವಿತರಕರಿಗೂ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಸಂಘ ಮೂಡಲಗಿ ತಾಲೂಕಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲು ಬೋಳನವರ, ಕಾರ್ಯದರ್ಶಿ ಅಲ್ತಾಫ್ ಹವಾಲ್ದಾರ, ಸಂಘದ ಸದಸ್ಯರಾದ ಸುಭಾಷ ಗೊಡ್ಯಾಗೋಳ, ಚಂದ್ರಶೇಖರ ಪತ್ತಾರ, ಹಣಮಂತ ಸತ್ತರಡ್ಡಿ ಹಾಗೂ ಪತ್ರಕರ್ತರಾದ ಭಗವಂತ ಉಪ್ಪಾರ, ಸುಭಾಷ ಕಡಾಡಿ ಹಾಗೂ ಪತ್ರಿಕಾ ವಿತರಕರು ಉಪಸ್ಥಿತರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page