ಶುಕ್ರವಾರ , ಮಾರ್ಚ್ 29 2024
kn
Breaking News

ತಳಮಟ್ಟದಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಅಗತ್ಯ ಸಹಕಾರ ಸಹಾಯ ನೀಡಿದಾಗ ಮಾತ್ರ ನಿವೃತ್ತಿ ಸಂದರ್ಭದಲ್ಲಿ ಸನ್ಮಾನಗಳಿಸಲು ಸಾಧ್ಯವಾಗುವದು : ಬಿಇಒ ಅಜಿತ ಮನ್ನಿಕೇರಿ

Spread the love

ಮೂಡಲಗಿ: ಸರಕಾರಿ ನೌಕರರು ಶೃದ್ಧಾಭಕ್ತಿಯಿಂದ ಸಾರ್ವಜನಿಕ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿದಾಗ ಮಾತ್ರ ಜನ ಮನ್ನಣೆ ದೊರೆಯುತ್ತದೆ. ತಳಮಟ್ಟದಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಅಗತ್ಯ ಸಹಕಾರ ಸಹಾಯ ನೀಡಿದಾಗ ಮಾತ್ರ ನಿವೃತ್ತಿ ಸಂದರ್ಭದಲ್ಲಿ ಸನ್ಮಾನಗಳಿಸಲು ಸಾಧ್ಯವಾಗುವದು ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.
ಅವರು ಸಮೀಪದ ಕುಲಗೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ನಿವೃತ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸುಧೀರ್ಘ ಸೇವಾವಧಿಯಲ್ಲಿ ಅನೇಕ ಕಡೆ ಕಾರ್ಯನಿರ್ವಹಿಸುವ ಮಹತ್ತರವಾದ ಕಾರ್ಯವು ಸರಕಾರಿ ನೌಕರರ ಮೇಲಿರುತ್ತದೆ. ಸಾರ್ವಜನಿಕ ಬದುಕಿನೊಂದಿಗೆ ಸರಕಾರಿ ನಿಯಮಾವಳಿ ಪ್ರಕಾರ ಕಾರ್ಯ ನಿರ್ವಹಿಸಿ ಉಳಿದ ಅವಧಿಯಲ್ಲಿ ಸ್ಥಳೀಯರೊಂದಿಗೆ ಅನ್ಯೂನ್ಯತೆಯಿಂದ ಬಾಳಬೇಕು. ಶಿಕ್ಷಣ ಇಲಾಖೆಯ ರುದ್ರಪ್ಪ ಮಹಾಲಿಂಗಪೂರ, ಜಿ.ಆರ್.ಬಿ.ಸಿ ಸಹಾಯಕ ಕಾರ್ಯನಿರ್ವಹಕ ಅಭಿಯಂತರ ವಿರುಪಾಕ್ಷ ಪತ್ತಾರ ಅವರುಗಳು ಈ ಭಾಗದಲ್ಲಿ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕರ ಸೇವಾಕಾರ್ಯಗಳನ್ನು ಪ್ರಶಂಸನೀಯವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಜನಮನ್ನಣೆ ಪಡೆಯಲು ಸಾಧ್ಯವಾಗಿದೆ. ಪಾರೀಜಾತ ಕುಲಗೋಡ ಗ್ರಾಮವು ಮಾದರಿಯ ಗ್ರಾಮವೆಂದು ರಾಷ್ಟ್ರೀಯ ಮಾನ್ಯತೆ ಹೊಂದಿರುವದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘಟಕ, ಮಾಜಿ ತಾಪಂ ಸದಸ್ಯ ಸುಭಾಸ ವಂಟಗೋಡಿ ಮಾತನಾಡಿ, ನಿವೃತ್ತಿ ಹೊಂದಿದ ಎಲ್ಲರಿಗೂ ನಾಗರೀಕ ಸನ್ಮಾನ ದೊರೆಯುವದಿಲ್ಲ. ಜನರ ಮನ ಗೆದ್ದವರಿಗೆ ಮಾತ್ರ ನಾಗರೀಕ ಸನ್ಮಾನ ದೊರೆಯುವದು. ಇಬ್ಬರು ಸನ್ಮಾನಿತರು ನಮ್ಮ ಗ್ರಾಮಕ್ಕೆ ವಿವಿಧ ರೀತಿಯಲ್ಲಿ ನೀಡಿರುವ ಕೊಡುಗೆಗಳು ಸ್ಮರಣೀಯವಾಗಿವೆ ಎಂದರು.
ಸಮಾರoಭದಲ್ಲಿ ಬಸನಗೌಡ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘಟನೆಯ ಎಸ್.ಎಮ್ ಲೋಕನ್ನವರ, ಎಮ್.ವಾಯ್ ಸಣ್ಣಕ್ಕಿ, ಎ.ಪಿ ಪರಸನ್ನವರ, ಎಮ್.ಜಿ. ಮಾವಿನಗಿಡದ, ರಾಚಪ್ಪ ಅಂಗಡಿ ಮಾತನಾಡಿ, ನಿವೃತ್ತರ ಸೇವಾ ಕಾರ್ಯವೈಕರಿ ಹಾಗೂ ನಿವೃತ್ತಿಯ ಜೀವನದಲ್ಲಿ ಸಾರ್ವಜನಿಕ ಬದುಕಿನಲ್ಲಿ ಯಶಸ್ವಿಹೊಂದುವ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ರುದ್ರಪ್ಪ ಮಹಾಲಿಂಗಪೂರ, ವಿರುಪಾಕ್ಷ ಪತ್ತಾರ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮಯ ಸೇವಾವಧಿಯಲ್ಲಿ ಕುಲಗೋಡ ಗ್ರಾಮಸ್ಥರ ಸಹಾಯ ಸಹಕಾರ ಅತ್ಯಮೂಲ್ಯವಾಗಿತ್ತು. ಸಾರ್ವಜನಿಕ ಬದುಕಿನಲ್ಲಿ ನಮ್ಮಿಂದಾಗುವ ಕಾರ್ಯಗಳನ್ನು ಇನ್ನು ಮುಂದೆಯೂ ಮಾಡುವದಾಗಿ ಹೇಳಿದರು.
ಕುಲಗೋಡ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳಿoದ ನಾಗರಿಕ ಸನ್ಮಾನ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೂಡಲಗಿ ಘಟಕದ ಪದಾಧಿಕಾರಿಗಳಿಗೆ ಸದಸ್ಯರಿಗೆ ನಾಗರಿಕ ಸನ್ಮಾನ ನಡೆಯಿತು.
ಸಮಾರಂಭದಲ್ಲಿ ಗ್ರಾ.ಪಂ ಅಧ್ಯಕ್ಷೆ ವಿಮಲಾ ಸಸಾಲಟ್ಟಿ. ನಿರಾವರಿ ಇಲಾಕೆಯ ಎಇಇ ಕಾಂತು ಜಾಲಿಬೇರಿ, ಪಿಕೆಪಿಎಸ್ ಅಧ್ಯಕ್ಷರಾದ ಅಜ್ಜಪ್ಪ ಗಿರಡ್ಡಿ, ವೆಂಕಣ್ಣಾ ಚನ್ನಾಳ, ತಾಪಂ ಅಕ್ಷರ ದಾಸೋಹ ನಿರ್ದೇಶಕ ಎ.ಬಿ ಮಲಬನ್ನವರ, ಢವಳೇಶ್ವರ ಗ್ರಾಪಂ ಅಧ್ಯಕ್ಷ ರಂಗಪ್ಪ ಕಳ್ಳಿಗುದ್ದಿ, ಬಸು ಯರಗಟ್ಟಿ. ಪಿ.ಡಿ.ಓ ಸದಾಸಿವ ದೇವರ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶಿವಪುತ್ರ ಲಕ್ಷ್ಮೇಶ್ವರ , ಮಲ್ಲಿಕಾರ್ಜುನ ತಿಪ್ಪಿಮನಿ, ಶ್ರೀಪತಿ ಗಣಿ, ದತ್ತು ಕುಲಕರ್ಣಿ, ಮಾರುತಿ ಬಾಗಿಮನಿ, ಪ್ರಶಾಂತ ಒಂಟಗೂಡಿ, ಪ್ರಕಾಶ ಹಿರೆಮೇತ್ರಿ, ಯಮನಪ್ಪ ಸಣ್ಣಮೇತ್ರಿ, ಲಕ್ಷö್ಮಣ ಗುಬ್ಬನ್ನವರ, ಬಸು ಬಿಲಕುಂದಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ತಾಲೂಕಾಧ್ಯಕ್ಷ ಎಲ್.ಎಮ್ ಬಡಕಲ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಪಿ.ಬಿ ಕುಲಕರ್ಣಿ, ಬಿ.ಎ ಡಾಂಗೆ, ಬಿ.ಬಿ ಕೆವಟಿ, ಬಿ.ಎಲ್ ನಾಯಿಕ, ವಾಯ್.ಡಿ ಝಲ್ಲಿ, ಎಲ್.ಎಮ್ ಬೂಮನ್ನವರ, ಶಿವಾನಂದ ಕುರಣಗಿ, ಗೋವಿಂದ ಸಣ್ಣಕ್ಕಿ, ರಮೇಶ ಬುದ್ನಿ, ಸಿಆರ್‌ಪಿಗಳಾದ ವಿ.ಆರ್ ಬರಗಿ, ವ್ಹಿ. ಆಯ್ ಮಿಲ್ಲಾನಟ್ಟಿ, ಹನಮಂತ ಬೆಳಗಲಿ, ಪ್ರಧಾನಗುರಮಾತೆ ಮೀರಾ ಕುಲಕರ್ಣಿ, ಎಫ್.ಡಿ ದೊಡಮನಿ, ಸಂತೋಷ ಪಾಟೀಲ, ಎಸ್.ಎಮ್ ದಬಾಡಿ ಹಾಗೂ ಗ್ರಾಮಸ್ಥರು ಶಾಲಾ ಶಿಕ್ಷಕರು ಇದ್ದರು.
ಸಮಾರಂಭದಲ್ಲಿ ದುಂಡಪ್ಪ ಹರಿಜನ ನಿರೂಪಿಸಿದರು. ಶಂಕರ ಹಾದಿಮನಿ ಸ್ವಾಗತಿಸಿ, ಸುರೇಶ ತಳವಾರ ವಂದಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page