ಶುಕ್ರವಾರ , ಮಾರ್ಚ್ 29 2024
kn
Breaking News

ಶೈಕ್ಷಣಿಕ ವರ್ಷಾರಂಭವು ಶೈಕ್ಷಣಿಕ ವಲಯದಲ್ಲಿ ಅದ್ಧೂರಿ ಆಚರಣೆ. ಮಕ್ಕಳ, ಪಾಲಕರ, ಶಿಕ್ಷಕರ ಹಾಗೂ ಸಮುದಾಯದ ಪಾಲ್ಗೋಳ್ಳುವಿಕೆ ಹರ್ಷದಾಯಕ : ಬಿಇಒ ಅಜಿತ ಮನ್ನಿಕೇರಿ

Spread the love

ಮೂಡಲಗಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭವು ಶೈಕ್ಷಣಿಕ ವಲಯದಲ್ಲಿ ಅದ್ಧೂರಿಯಾಗಿ ಜರುಗಿತು. ಮಕ್ಕಳ, ಪಾಲಕರ, ಶಿಕ್ಷಕರ ಹಾಗೂ ಸಮುದಾಯದ ಪಾಲ್ಗೋಳ್ಳುವಿಕೆಯು ಹರ್ಷದಾಯಕವಾಗಿತ್ತು ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಅಭಿಪ್ರಾಯ ವ್ಯಕ್ತಪಡಿದರು.
ಅವರು ಸೋಮವಾರ ಜರುಗಿದ ಶಾಲಾ ಪ್ರಾರಂಭೋತ್ಸವ ಹಾಗೂ ಕಲಿಕಾ ಚೇತರಿಕೆ ಕಾರ್ಯಕ್ರಮ ನಿಮಿತ್ಯ ಶೈಕ್ಷಣಿಕ ವಲಯದ ಪಟಗುಂದಿಯ ಸರಕಾರಿ ಹಿರಿಯ ಕನ್ನಡ ಮತ್ತು ಉರ್ದು ಶಾಲೆ, ಬಳೋಬಾಳ ಗ್ರಾಮದ ಸರಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆ, ಅನುದಾನಿತ ಎನ್.ಎಸ್.ಎಫ್ ಶಾಲೆಗಳಿಗೆ ಭೇಟಿ ನೀಡಿದರು. ಮೂಡಲಗಿ ಶೈಕ್ಷಣಿಕ ವಲಯದ ಸರಕಾರಿ ೨೩೫ ಪ್ರಾಥಮಿಕ, ೩೪ ಪ್ರೌಢ, ೮ ಮೊರಾರ್ಜಿ ವಸತಿ ಶಾಲೆಗಳಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭವನ್ನು ಆಚರಿಸಲಾಯಿತು. ವಲಯಾದ್ಯಂತ ಶಾಲೆಗಳಲ್ಲಿ ತಳಿರು ತೋರಣ, ವಾದ್ಯ ಮೇಳಗಳೊಂದಿಗೆ ಪುಷ್ಪ ಅರ್ಚಣೆ, ಮಂಗಳಾರತಿಯೊAದಿಗೆ ಮಕ್ಕಳನ್ನು ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಅಣಿಗೋಳಿಸಿದ್ದು, ವಿಶೇಷವಾಗಿ ಕೇಲವು ಕಡೆ ಬೆಳ್ಳಿರಥ, ಅಕ್ಷರ ಬಂಡಿ, ಪ್ರಭಾತ ಪೇರಿ, ಕುಂಭ ಮೇಳಗಳ ಮೂಲಕ ಶೈಕ್ಷಣಿಕ ಘೋಷವಾಕ್ಯಗಳೊಂದಿಗೆ ಮಕ್ಕಳನ್ನು ವಿನೂತನ ರೀತಿಯಲ್ಲಿ ಶಾಲೆಗೆ ಭರಮಾಡಿಕೊಂಡಿದ್ದಾರೆ ಎಂದರು.
ಕೋವಿಡ್-೧೯ ಹಾವಳಿಯಿಂದಾಗಿ ಮಕ್ಕಳ ಕಲಿಕೆ ಮೇಲೆ ಫರಿಣಾಮವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಫಲಪ್ರದ ಕಲಿಕೆಯಾಗುವ ನಿಟ್ಟಿನಲ್ಲಿ ಸರಕಾರವು ಯೋಜನೆ ಹಾಕಿರುವ ವಿಶೇಷ ಕಲಿಕಾ ಚೇತರಿಕೆ ಕಾರ್ಯಕ್ರಮದ ಮೂಲಕ ಮಕ್ಕಳನ್ನು ಶೈಕ್ಷಣಿಕವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವದಾಗಿದೆ. ರಾಷ್ಟಿçÃಯ ಶಿಕ್ಷಣ ನೀತಿ ೨೦೨೦ ರಂತೆ ೨೦೨೨-೨೩ರನ್ನು ಕಲಿಕಾ ಚೇತರಿಕೆ ವರ್ಷವಾಗಿದೆ. ಮಳೆಬಿಲ್ಲು ಕಾರ್ಯಕ್ರಮದ ಮೂಲಕ ೧೪ ದಿನಗಳವರೆಗೆ ಮಕ್ಕಳಿಗೆ ಆಟದ ಹಬ್ಬ, ಆಟಿಕೆ ತಯಾರಿಕೆ, ನಾಟಕ, ಕಲಾ, ಚಿತ್ರ, ಕಥೆ ಕವಿತೆ ಗಣಿತ ಗಮ್ಮತ್ತು, ವಿಜ್ಞಾನ ಗೊಂಚಲು, ಸಾಂಸ್ಕೃತಿಕ ಸಂಭ್ರಮಗಳAತಹ ವಿನೂತನ ಕಾರ್ಯಚಟುವಟಿಕೆಗಳು ನಡೆಯುತ್ತವೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಯ ಜೊತೆಗೆ ಸರ್ವಾಂಗೀಣ ಅಭಿವೃದ್ಧಿಯಾಗುವಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವದಾಗಿ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದ್ದಾರೆ.
ಶೈಕ್ಷಣಿಕ ವಲಯದಲ್ಲಿ ಮದ್ಯಾಹ್ನ ಉಪಹಾರ ಯೋಜನೆಯಡಿ ಸಿಹಿಯೂಟ, ವಿವಿಧ ಖಾಧ್ಯ, ಬಿಸಿಯೂಟ ನೀಡಿದ್ದಾರೆ. ಮನೆಮನೆಗಳಿಗೆ ಕರಪತ್ರ, ಶಿಕ್ಷಣದ ಕುರಿತಾದ ಘೋಷವಾಕ್ಯಗಳನ್ನು ಚುನಾಯಿತ ಪ್ರತಿನಿಧಿಗಳು, ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಬಿ.ಆರ್.ಪಿ, ಸಿ.ಆರ್.ಪಿ, ಮುಖ್ಯ ಶಿಕ್ಷಕರು, ಶಿಕ್ಷಕರು, ಅಡುಗೆ ಸಿಬ್ಬಂದಿಯವರು ಭಾಗವಹಿಸುವ ಮೂಲಕ ಶೈಕ್ಷಣಿಕ ವರ್ಷಾರಂಭಕ್ಕೆ ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ದೈಹಿಕ ಪರಿವೀಕ್ಷಕ ಎ.ಎ ಜುನೇದಿ ಪಟೇಲ್, ಶಿಕ್ಷಣ ಸಂಯೋಜಕ ಸತೀಶ ಬಿ.ಎಸ್ ಹಾಗೂ ಕಛೇರಿ ಸಿಬ್ಬಂದಿಯವರು ವಲಯ ವ್ಯಾಪ್ತಿಯ ಶಾಲೆಗಳಿಗೆ ಬೇಟಿ ನೀಡಿ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page