ಗುರುವಾರ , ಮಾರ್ಚ್ 28 2024
kn
Breaking News

ತಾಲೂಕಾ ಆಡಳಿತದಿಂದ ಹೇಮರಡ್ಡಿ ಮಲ್ಲಮ್ಮಳ ಜಯಂತಿ ಆಚರಣೆ

Spread the love

ಮೂಡಲಗಿ: ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಆತಾಲೂಕಾ ಆಡಳಿತದಿಂದ ಶಿವಶರಣೆ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮಳ ಜಯಂತಿ ಆಚರಿಸಲ್ಲಾಯಿತು.
ಹೇಮರಡ್ಡಿ ಮಲ್ಲಮ್ಮಳ ಭಾವ ಚಿತ್ರಕ್ಕೆ ಮೂಡಲಗಿ ಪುಸರಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾದ್ಯಕ್ಷೆ ರೇಣುಕಾ ಹಾದಿಮನಿ ಮತ್ತು ತಹಶೀಲ್ದಾರ ಡಿ.ಜಿ.ಮಹಾತ ಪೂಜೆಸಲ್ಲಿಸಿದರು.
ಈ ಸಮಯದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗು ವಾಣಿಜ್ಯ ಮಹಾವಿದ್ಯಾಲಯ ನಿವೃತ್ತ ಪ್ರಾದ್ಯಾಪಕ ಪ್ರೊ.ಪಿ.ಕೆ.ರಡ್ಡೇರ ಮಾತನಾಡಿ, ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನ್ನ ಜೀವನ ಚರಿತ್ರೆ ವೈವಿದ್ಯಮಯವಾಗಿದು, ಅವಳು ಇಡಿ ಮಹಿಳಾ ಕುಲಕ್ಕೆ ಆದರ್ಶ ಪ್ರೀಯಳಾಗಿ ಬೆಳೆದು ಮಲ್ಲಿಕಾರ್ಜು ಭಕ್ತಳಾಗಿ,ತವರು ಮತ್ತು ಗಂಡನ ಮನೆಯ ಕೀರ್ತಿ ಪತ್ತಾಕೆಯನ್ನು ಹೆಚ್ಚಿಸಿದ ಮಹಾಸಾದ್ವಿ ಮಲ್ಲಮ್ಮನ ತತ್ವಾದರ್ಶಗಳು ಇಂದಿಗೂ ಮನುಕ್ಕುಲಕ್ಕೆ ಆದರ್ಶವಾಗಿವೆ ಎಂದರು.
ಹೆಮ್ಮರಡ್ಡಿ ಮಲ್ಲಮ್ಮ ಶ್ರೀಮಂತ ಮನೆಯಲ್ಲಿ ಹುಟ್ಟಿ ಮಂದ ಪತಿಯ ಬರಮರಡ್ಡಿಯನ್ನು ಮದುವೆಯಾಗಿ ಸದಾ ಉಸಿರು ಉಸಿರಿನಲ್ಲಿ ಶ್ರೀಶೈಲ್ ಮಲ್ಲಿಕಾರ್ಜು ನೆನೆಯುತ್ತಾ ಮಲ್ಲಿಕಾರ್ಜುನನ್ನು ಒಲಸಿಕೊಂಡವಳು ಮಲ್ಲಮ್ಮ, ಗಂಡನ ಮನೆಯಲ್ಲಿ ಅತ್ತೆ ನೆಗೆನಿಯರ ಕಷ್ಟ ಹೇಳತ್ತಿರಸ್ಟಿದರು ಸದಾ ಹಸನ ಮುಖಿಯಾಗಿ ಮಲ್ಲಿಕಾರ್ಜುನನಿಗೆ ಭಕ್ತಿ ಸಮರ್ಪಿಸಿ ಜ್ಞಾನದ ವ್ಯವಸ್ಥೆಯಲ್ಲಿ ಇರುತ್ತಿದ ಹೇಮರಡ್ಡಿ ಮಲ್ಲಮ್ಮ ತನ್ನ ವಿವೇಕದಿಂದ ನಾಡಿಗೆ ವೇಮನನ್ನು ಮಹಾಯೋಗಿಯನ್ನಾಗಿ ಮಾಡಿದ ಕೀರ್ತಿ ಹೇಮರಡ್ಡಿ ಮಲ್ಲಮ್ಮಳಗೆ ಸಲ್ಲುತದೆ. ಇಂತಹ ವಿಚಾರಗಳನ್ನು ಪ್ರತಿಯೋಬ್ಬರು ಮಹಿಳೆಯು ಅನುಸರಿಸಿದರೆ ಆ ಮನೆಯು ಸ್ವರ್ಗವಾಗುವುದು ಎಂದರು.
ಸಮಾರಂಭದಲ್ಲಿ ಬಿಇಒ ಅಜೀತ ಮನ್ನಿಕೇರಿ, ಪಿಎಸ್‌ಐ ಎಚ್.ವಾಯ್.ಬಾಲದಂಡಿ, ತಾ.ಪಂ ಅಧಿಕಾರಿ ಎಫ್.ಜಿ.ಚಿನ್ನನವರ, ಹೆಸ್ಕಾಂ ಅಧಿಕಾರಿ ಬಿ.ವಾಯ್.ಕುರಿ, ಪುರಸಭೆ ಚಿದಾನಂದ ಮುಗಳಖೋಡ ವಿವಿಧ ಇಲಾಖೆಯ ಅಧಿಕಾರಿಗಳು, ಪುರಸಭೆ ಸದಸ್ಯರು ಹಾಗೂ ರಡ್ಡಿ ಸಮಾಜದ ಮುಖಂಡರು, ಭಾಂದವರು ಮತ್ತಿತರು ಭಾಗವಹಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page