ಶುಕ್ರವಾರ , ಮಾರ್ಚ್ 29 2024
kn
Breaking News

ಶ್ರೀ ಹನುಮಾನ ದೇವಸ್ಥಾನದಲ್ಲಿ ನೂತನ ಹನುಮಾನ ದೇವರ ಮೂರ್ತಿ ಪ್ರತಿಷ್ಠಾಪನೆ

Spread the love

ಮೂಡಲಗಿ: ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ಶ್ರೀ ಹನುಮಾನ ದೇವಸ್ಥಾನದಲ್ಲಿ ನೂತನ ಹನುಮಾನ ಮೂರ್ತಿಯನ್ನು ಸೋಮವಾರ ಬೆಳಿಗ್ಗೆ ಹೋಮ, ರುದ್ರಾಭಿಷೇಕ ಹಾಗೂ ವಿವಿಧ ವಿಧಿ, ವಿಧಾನಗಳ ಮೂಲಕ ಪ್ರತಿಷ್ಠಾಪನೆ ಮಾಡಿದರು.
ಧಾರ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿದ್ದ ಮರೆಗುದ್ದಿ ನಿರುಪಾದೇಶ್ವರ ಸ್ವಾಮೀಜಿ ಅವರು ಮಾತನಾಡಿ ಒಂದು ಶಿಲ್ಪವು ದೇವರಾಗಬೇಕಾದರೆ ಅದಕ್ಕೆ ಸಂಸ್ಕಾರವನ್ನು ನೀಡಬೇಕು. ಗುರುವಿನ ಸ್ಪರ್ಶ, ಮಾರ್ಗದರ್ಶನ ಬೇಕಾಗುವುದು. ಹಾಗೆಯೇ ಮನುಷ್ಯನು ಸಹ ದೈವಭಕ್ತನಾಗಿ ಸಂಸ್ಕಾರ ಮತ್ತು ಗುರುವಿನ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ರಟಕಲ, ಕೊಕಟನೂರದ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ಹನಮಂತನು ರಾಮನಲ್ಲಿ ಇಟ್ಟ ಅಚಲವಾದ ಭಕ್ತಿಯು ಭಕ್ತಿಯ ಸಾಕಾರತೆಯನ್ನು ತಿಳಿಸುತ್ತದೆ. ಎದೆ ಬಗೆದು ರಾಮನನ್ನು ತೋರಿಸುವ ಹನಮಂತನ ಭಕ್ತಿಯು ಅನನ್ಯವಾದದ್ದು ಎಂದರು.
ನಾಗೂರದ ಪ್ರಭುಲಿಂಗ ಸ್ವಾಮೀಜಿ, ವೇದಮೂರ್ತಿ ಗಂಗಾಧರ ಹಿರೇಮಠ, ಸೋಮಯ್ಯ ಹಿರೇಮಠ ಇದ್ದರು.
ಬೆಳಗಾವಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು.
ಶಾಸಕ ಸಿದ್ದು ಸೌದಿ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಅರವಿಂದ ದಳವಾಯಿ, ಭೀಮಪ್ಪ ಗಡಾದ, ಬಿ.ಬಿ. ಹಂದಿಗುಂದ, ರಮೇಶ ಉಟಗಿ, ಎಂ.ಎಂ ಪಾಟೀಲ, ಸುಭಾಷ ಪಾಟೀಲ, ಲಕ್ಷö್ಮಣ ಉಟಗಿ, ಗುರಪ್ಪ ಉಟಗಿ, ಸವಿತಾ ಚಂದ್ರಶೇಖರ ನಾಯಕ, ಲಕ್ಷ್ಮೀ ಪಾಟೀಲ, ಶ್ರೀದೇವಿ ಡೊಂಬರ, ಗೀತಾ ಉಟಗಿ, ಎಂ.ಜಿ. ಪಾಟೀಲ, ಶ್ರೀಶೈಲ್ ಪೂಜಾರಿ, ಚಂದ್ರಶೇಖರ ನಾಯಕ, ವಿನಾಯಕ ಬಾಗೇವಾಡಿ, ಎಂ.ವಿ. ನಾಡಗೌಡ, ಶಿವನಗೌಡ ನಾಡಗೌಡ, ವೆಂಕನಗೌಡ ನಾಡಗೌಡ, ಪಾಂಡಪ್ಪ ನಾಡಗೌಡ, ಹಣಮಂತ ಕುರಿ, ಈರಪ್ಪ ಹುಲಗಬಾಳಿ ಇದ್ದರು. ಅನ್ನಸಂತರ್ಪಣೆಯಲ್ಲಿ ಭಕ್ತರು ಭಾಗವಹಿಸಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page