ಶುಕ್ರವಾರ , ಮಾರ್ಚ್ 29 2024
kn
Breaking News

ಶ್ರೀ ವೇಮನ್ ಕೋ.ಆಪ್ ಕ್ರಡಿಟ್ ಸೊಸೈಟಿಗೆ ರೂ. ೧.೭೨ ಕೋಟಿ ಲಾಭ : ಅಧ್ಯಕ್ಷ ಸಂತೋಷ ಸೋನವಾಲಕರ

Spread the love

ಮೂಡಲಗಿ: ಇಲ್ಲಿಯ ಶ್ರೀ ವೇಮನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯು ೨೦೨೨ರ ಮಾರ್ಚ ಅಂತ್ಯಕ್ಕೆ ರೂ.೧.೭೨ ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಸಂತೋಷ ಕೆ. ಸೋನವಾಲಕರ ಅವರು ತಿಳಿಸಿದರು.
ಸೊಸೈಟಿಯ ಪ್ರಗತಿ ಕುರಿತು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸೊಸೈಟಿಯು ಸದ್ಯ ರೂ. ೨.೬೯ ಕೋಟಿ ಶೇರು ಬಂಡವಾಳ, ರೂ. ೬.೧೬ ಕೋಟಿ ನಿಧಿಗಳು, ರೂ. ೯೯.೧೦ ಠೇವುಗಳು, ರೂ. ೪೧.೫೬ ಕೋಟಿ ವಿವಿಧ ಬ್ಯಾಂಕ್‌ಗಳಲ್ಲಿ ಗುಂತಾವಣಿಗಳು ಮತ್ತು ರೂ. ೭.೦೭ ಕೋಟಿ ವಿವಿಧ ಬ್ಯಾಂಕ್‌ಗಳ ಖಾತೆಗಳಲ್ಲಿ ಠೇವು ಇರುವವು. ರೂ. ೧೧೪.೨೨ ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು ರೂ.೩೯೧.೯೦ ಕೋಟಿ ವಾರ್ಷಿಕ ವಹಿವಾಟು ಮಾಡಿದ್ದು, ಅಡಿಟ್‌ದಲ್ಲಿ ‘ಅ’ ಶ್ರೇಯಾಂಕವನ್ನು ಪಡೆದುಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಶೇ.೧೩ರಷ್ಟು ಲಾಭಾಂಶವನ್ನು ವಿತರಿಸಿದೆ ಎಂದು ತಿಳಿಸಿದರು.
‘ಬಂಗಾರ ಭದ್ರತಾ ನಗದು ಪತ್ತಿನ ಸಾಲ’ ಯೋಜನೆಯನ್ನು ಸೊಸೈಟಿಯು ಪ್ರಾರಂಭಿಸುವ ಮೂಲಕ ಬಂಗಾರದ ಮೇಲೆ ಸುಲಭವಾಗಿ ಸಾಲ ದೊರೆಯುವಂತ ವಿನೂತನವಾದ ಯೋಜನೆಯನ್ನು ಸಹಕಾರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಾಡಿರುವ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ ಎಂದರು. ಸೊಸೈಟಿಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಒಟ್ಟು ೧೬೧ ಜನರಿಗೆ ಪ್ರತಿಯೊಬ್ಬರಿಗೆ ರೂ. ೫ ಲಕ್ಷ ಮೌಲ್ಯದ ಆರೋಗ್ಯ ವಿಮೆ ಮಾಡಿಸಿದ್ದು, ಈಗಾಗಲೇ ಸಾಕಷ್ಟು ಸಿಬ್ಬಂದಿಯವರು ವಿಮೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದರು.
ಸೊಸೈಟಿಯ ಉಪಾಧ್ಯಕ್ಷ ಹಣಮಂತ ಆರ್. ಪ್ಯಾಟಿಗೌಡರ ಮಾತನಾಡಿ ಸೊಸೈಟಿಯು ಸದ್ಯ ೬ ಶಾಖೆಗಳನ್ನು ಹೊಂದಿದ್ದು ಎಲ್ಲ ಶಾಖೆಗಳು ಪ್ರಗತಿಯಲ್ಲಿವೆ. ಇನ್ನು ನಾಲ್ಕು ಶಾಖೆಗಳನ್ನು ತೆರೆಯುವ ಮೂಲಕ ಸೊಸೈಟಿಯ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವಿಜಯಕುಮಾರ ಸೋನವಾಲ್ಕರ, ಪಾಂಡಪ್ಪ ಸೋನವಾಲ್ಕರ್, ಯಮನಪ್ಪ ಮಂಟನವರ, ತಮ್ಮಣ್ಣ ಝಂಡೇಕುರಬರ, ಹಣಮಂತ ದಂಡಪ್ಪನವರ, ಸಿದ್ದಪ್ಪ ಪೂಜೇರಿ, ಸಚಿನ ಸೋನವಾಲ್ಕರ್, ಲಕ್ಷ್ಮೀಬಾಯಿ ಸಂತಿ, ಲತಾ ಸತರಡ್ಡಿ, ರಾಮಪ್ಪ ಹಾದಿಮನಿ ಹಾಗೂ ಪ್ರಧಾನ ವ್ಯವಸ್ಥಾಪಕ ಪರಶುರಾಮ ಕುಟರಟ್ಟಿ, ಸಹಾಯಕ ಕಾರ್ಯದರ್ಶಿ ಬಾಹುಬಲಿ ಜೋಕಿ ಇದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page