ಗುರುವಾರ , ಮಾರ್ಚ್ 28 2024
kn
Breaking News

ಏ. ೧೧ ರಿಂದ ಸಿದ್ಧ ಸಮಾಧಿ ಯೋಗ ಶಿಬಿರ : ಅರುಣ ಗುರೂಜೀ

Spread the love

ಮೂಡಲಗಿ: ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರಿನ, ಶಾಖೆ ಮೂಡಲಗಿಯ ಅರುಣ ಗುರೂಜೀ ಅವರ ಮಾರ್ಗದರ್ಶನದಲ್ಲಿ ಏ. ೧೧ ರಿಂದ ಸಾಯಂಕಾಲ ೫.೩೦ಕ್ಕೆ ‘ಸಿದ್ಧ ಸಮಾಧಿ ಯೋಗ-ಎಸ್‌ಎಸ್‌ವೈ’ ಶಿಬಿರವನ್ನು ಸ್ಥಳೀಯ ಶಿವಬೋಧರಂಗ ಮಠದ ಆವರಣದಲ್ಲಿ ಏರ್ಪಡಿಸಿರುವರು.
ಪ್ರಾಣಾಯಾಮ, ಧ್ಯಾನ, ಯೋಗಾಸನ, ಸೂರ್ಯ ನಮಸ್ಕಾರ, ಗಾಯತ್ರಿ ಮಹಾಮಂತ್ರೋಪದೇಶ ಇವುಗಳ ಜೋತೆಗೆ ಉದ್ವೇಗ, ಒತ್ತಡ ನಿವಾರಣೆ, ಆಹಾರ ಕ್ರಮ, ವಿವಿಧ ಕಾಯಿಲೆಗಳ ನಿವಾರಣೋಪಾಯಗಳಿಗೆ ಶಿಬಿರದಲ್ಲಿ ಹೇಳಿಕೊಡುವರು.
ಶಿಬಿರದ ಬಗ್ಗೆ ಪರಿಚಯ ಕಾರ್ಯಕ್ರಮವು ರವಿವಾರ ಏ. ೧೦ ರಂದು ಬೆಳಿಗ್ಗೆ ೧೧.೦೦ಕ್ಕೆ ಶಿವಬೋಧ ಮಠದ ಆವರಣದಲ್ಲಿ ಜರುಗಲಿದೆ. ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಂಘಟಕರು ತಿಳಿಸಿದ್ದಾರೆ. ಅಧಿಕ ಮಾಹಿತಿ ಪಡೆಯಲು ಸಂಪರ್ಕಕ್ಕಾಗಿ: ಮೊ. ೯೪೪೮೬೩೭೯೧೬, ೯೪೮೧೨೯೨೪೧೬, ೯೪೪೮೬೩೬೨೧೫, ೯೪೮೧೦೦೫೦೭೫ ೮೬೬೦೭೭೩೪೮೬ ಸಂಪರ್ಕಿಸಲು ತಿಳಿಸಿದ್ದಾರೆ.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page