ಶುಕ್ರವಾರ , ಮಾರ್ಚ್ 29 2024
kn
Breaking News

ದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

Spread the love

ಮೂಡಲಗಿ: ಡಾ. ಬಾಬಾಸಹೇಬ ಅಂಬೇಡ್ಕರ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ ಹೇಳಿದರು.
ಅವರು ಮಂಗಳವಾರದಂದು ಗಂಗಾ ನಗರದ ಅಂಬೇಡ್ಕರ ಭವನದಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ನೂತನ ನಗರ, ಗ್ರಾಮ ಘಟಕ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಸಂಘಟನೆ ಪ್ರಾರಂಭಿಸಿ ಸಂಘಟನೆ ಬಲಪಡಿಸುವಂತಹ ಕಾರ್ಯವಾಗಬೇಕು. ಅನ್ಯಾಯಗಳ ವಿರುದ್ಧ ದಿಟ್ಟವಾಗಿ, ಒಗ್ಗಟ್ಟಿನಿಂದ ಹೋರಾಡಿ, ನೊಂದವರಿಗೆ ನ್ಯಾಯ ದೊರಕಿಸುವಲ್ಲಿ ಮುಂದಾಗಬೇಕು ಎಂದು ನೂತನ ಪಾದಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಜಿಲ್ಲಾ ಸಂಘಟನಾ ಸಂಚಾಲಕ ಬಾಳೇಶ ಬನ್ನಟ್ಟಿ, ತಾಲೂಕಾ ಸಂಚಾಲಕ ಶಾಬಪ್ಪ ಸಣ್ಣಕ್ಕಿ, ಲಕ್ಷö್ಮಣ ತೆಳಗಡೆ, ಎಬಿನೇಜರ ಕರಬನ್ನವರ, ವೆಂಕಟೇಶ ದಾಸರ ಮಾತನಾಡಿದರು.
ಈ ಸಮಯದಲ್ಲಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು.
ಸಭೆಯಲ್ಲಿ ಅಶೋಕ ಉದ್ದಪ್ಪನವರ, ಚೇತನ ಗಣಾಚಾರಿ, ರಾಮಣ್ಣ ಇಡಿ, ಪ್ರಭಾಕರ ಬಂಗೆನ್ನವರ, ವಿಲಾಸ ಸಣ್ಣಕ್ಕಿ, ರಮೇಶ ಈರಗಾರ, ರಾಜು ಪರನ್ನವರ, ಮಾರುತಿ ಹರಿಜನ, ಶಿವಾನಂದ ಹೊಸಮನಿ, ಸುಂದರ ಬಾಲಪ್ಪನವರ, ಶಿವಾನಂದ ಸಣ್ಣಕ್ಕಿ ಹಾಗೂ ಆಯ್ಕೆಯಾದ ಪದಾಧಿಕಾರಿಗಳು ಇನಿತರರು ಇದ್ದರು.
ತಾಲೂಕಾ ಸಂಘಟನೆ ಕಮೀಟಿ: ತಾಲೂಕಾ ಸಂಚಾಲಕರಾಗಿ ಶಾಬಪ್ಪ ಸಣ್ಣಕ್ಕಿ, ಸಂಘಟನಾ ಸಂಚಾಲಕ ವಸಂತ ಕಾತೆನ್ನವರ, ಖಜಾಂಜಿ ವಿಠ್ಠಲ ತೊಂಡಿಕಟ್ಟಿ, ಪದಾಧಿಕಾರಿಗಳಾಗಿ ರಾಮಚಂದ್ರ ಶಿಡ್ಲೆಪ್ಪಗೋಳ, ಗೋವಿಂದ ಮಾದರ, ಯಮನಪ್ಪ ಮೇತ್ರಿ, ಪುಂಡಲೀಕ ಹಲಗಿ, ಲಕ್ಷö್ಮಣ ಗುಬ್ಬನ್ನವರ, ಬಸವರಾಜ ಮರಗನ್ನವರ ಆಯ್ಕೆಯಾಗಿದ್ದಾರೆ.
ದಲಿತ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು: ಸಂಚಾಲಕರಾಗಿ ಲಕ್ಕಪ್ಪ ತೆಳಗಡೆ, ಅನೀಲ ಗಸ್ತಿ, ಯಮನಪ್ಪ ಮೇತ್ರಿ, ಮಹದೇವ ಕೆಳಗಡೆ, ಭೀಮಪ್ಪ ದಾಸನ್ನವರ, ಮಹದೇವ ಜಕ್ಕನ್ನವರ, ಶಾನೂರ ಕೌಜಲಗಿ ಆಯ್ಕೆಯಾಗಿದ್ದಾರೆ.
ನಗರ ಸಮೀತಿ: ಸಂಚಾಲಕರಾಗಿ ತಮ್ಮನ್ನ ಗಸ್ತಿ, ಸಂಘಟನಾ ಸಂಚಾಲಕರಾಗಿ ಜಯವಂತ ನಾಗನ್ನವರ, ಸುಂದರ ಬಾಲಪ್ಪಗೋಳ, ರಾಮಪ್ಪ ಗಸ್ತಿ, ಶಾನೂರ ಸಣ್ಣಕ್ಕಿ ಅವರನ್ನು ಆಯ್ಕೆಗೋಳಿಸಿದ್ದಾರೆ.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page