ಶುಕ್ರವಾರ , ಮಾರ್ಚ್ 29 2024
kn
Breaking News

ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದೆ: ಬೀರಪ್ಪ ಅಂಡಗಿ

Spread the love

ಕೊಪ್ಪಳ: ಕ್ರೀಡೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅಂಗವಾಗಿದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ಪೂರ್ವ ಹಾಗೂ ಗಿಣಿಗೇರಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ,ಕ್ರೀಡೆ ಎನ್ನುವುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ.ಪ್ರತಿಯೊಬ್ಬರು ಕೂಡಾ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಡವಾಗಿರಬೇಕಾದರೆ ಕ್ರೀಡೆಯ ಅಗತ್ಯವಿದೆ.ಕ್ರೀಡಾಕೂಟಗಳು ಮಕ್ಕಳಲ್ಲಿ ಇರುವ ವಿವಿಧ ಕ್ರೀಡೆಗಳ ಆಸಕ್ತಿಯನ್ನು ಗುರುತಿಸಲು ಸಹಾಯಕವಾಗುತ್ತದೆ.ಮಕ್ಕಳು ಪ್ರತಿದಿನ ತಮ್ಮ ಶಾಲೆಯಲ್ಲಿಯಲ್ಲಿನ ಕಲಿಕಾ ಚಟುವಟಿಕೆಗಳಲ್ಲಿ ಮಾತ್ರ ಭಾಗವಹಿಸುತ್ತಾರೆ.ಇದನ್ನು ಅರಿತು ಮಕ್ಕಳಲ್ಲಿ ಇರುವ ಕ್ರೀಡಾ ಪ್ರತಿಭೆಯನ್ನು ಗುರುತಿಸುವ ಉದ್ದೇಶದಿಂದ ಇಂತಹ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತಿದೆ.ಮಕ್ಕಳು ಕೂಡಾ ಕೂಟದಲ್ಲಿ ಭಾಗವಹಿಸಿ ವಿಜೇತರಾಗುವುದರ ಮೂಲಕ ಶಾಲೆಗೆ ಕಿರ್ತಿ ತರುವಂತ ಕೆಲಸ ಮಾಡಲಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಮಾತನಾಡಿ,ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸುವಂತ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.ಸೋಲು-ಗೆಲುವು ಮುಖ್ಯವಲ್ಲ.ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯವಾಗಿದೆ.ವಿದ್ಯಾರ್ಥಿಗಳು ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ತಾಲೂಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಾಗೋಡಿ ಕ್ರೀಡಾ ಪ್ರತಿಜ್ಞಾ ಬೋಧನೆ ಮಾಡುವುದರ ಜೊತೆಗೆ ಕಾರ್ಯಕ್ರಮದ ಕುರಿತು ಪ್ರಸ್ತಾವಿಕವಾಗಿ ಮಾತನಾಡುತ್ತಾ,ಕ್ರೀಡಾಕೂಟದಲ್ಲಿ ತಿರ್ಪುಗಾರರು ಯಾವುದೇ ತಾರತಮ್ಯವನ್ನು ಮಾಡದೆ ಸೂಕ್ತ ಪ್ರತಿಭೆಯನ್ನು ಆಯ್ಕೆ ಮಾಡಬೇಕು.ಅಂದಾಗ ಮಾತ್ರ ಮುಂದಿನ ಹಂತದಲ್ಲಿ ಮಕ್ಕಳು ಭಾಗವಹಿಸಲು ನೇರವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕ ಕ್ರೀಡಾ ಅಧಿಕಾರಿ ಶರಣಬಸವ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ನಫಿಜಖಾನ ಪಠಾಣ, ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಪೂರ್ಣಿಮಾ, ಕೊಪ್ಪಳ ಪೂರ್ವ ಸಿ.ಆರ್.ಪಿ.ಯಲ್ಲಪ್ಪ,ಗಿಣಿಗೇರಿ ಕ್ಲಸ್ಟರಿನ ಸಿ.ಆರ್.ಪಿ.ಅಜೀತ ಪೂಜಾರ,ಬುದಗೂಂಪಾ ಸಿ.ಆರ್.ಪಿ.ಸಂಜು.ಡಿ.ಕೆ., ದೈಹಿಕ ಶಿಕ್ಷಕರಾದ ವೀರಭಧ್ರಯ್ಯಾ ಪೂಜಾರ,ಅಶೋಕ ಕಾತರಕಿ,ಶಿವಾನಂದ,ಬಸವರಾಜ ಹನಮಸಾಗರ,ಸಿದ್ದರಡ್ಡಿ ಮೇಟಿ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ದೈಹಿಕ ಶಿಕ್ಷಕರಾದ ಸಂಗನಗೌಡ ವೀರಪ್ಪಗೌಡ ನಿರೂಪಿಸಿದರು.
ದೈಹಿಕ ಶಿಕ್ಷಕರಾದ ಅಶೋಕ ಅಲಿಪೂರ ಸ್ವಾಗತಸಿ,ಶರಣಬಸವಸ್ವಾಮಿ ವಂದಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page