ಗುರುವಾರ , ಮಾರ್ಚ್ 28 2024
kn
Breaking News

12ನೇ ಶತಮಾನದಲ್ಲಿನ ಬಸವಣ್ಣನವರ ತತ್ವ ಕಲಿಯುಗದಲ್ಲಿ ನಡೆಯುತ್ತಿದೆ: ದಾನೇಶ್ವರ ಶ್ರೀಗಳು

Spread the love

ಹಳ್ಳೂರ: ಅತೀ ಆಸೆ ಮಾಡದೆ ಇದ್ದುದರಲ್ಲಿ ಸಂತೃಪ್ತಿ ಹೊಂದಬೇಕು. ಹಿಂದೂ ಮುಸ್ಲಿಂ ಒಂದಾಗಿ ಒಬ್ಬರ ಮನಸ್ಸು ಇನ್ನೋಬ್ಬರು ನೋಯಿಸದೇ ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕು. ಮಾನವನಿಗೆ ಜ್ಞಾನಾರ್ಜನೆ ಬಹಳ ಅವಶ್ಯಕತೆವಿದೆ ಎಂದು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.

ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಹಳ್ಳೂರ ಗ್ರಾಮಕ್ಕೆ ಆಗಮನದಿಂದ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಹಸಿರು ತೋರಣಗಳಿಂದ ಶೃಂಗರಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ಹಬ್ಬಿತ್ತು. ನಂತರ ಅನ್ನ ಪ್ರಸಾದ ನಡೆಯಿತ್ತು.

ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಹೋರಾಂಗಣದಲ್ಲಿ ನಡೆದ ಶ್ರೀ ಬಸವ ಗೋಪಾಲ 11ನೇ ಪಾರಮಾರ್ಥಿಕ ಸಪ್ತಾಹದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಅವರು ಮಹಾಲಕ್ಷ್ಮೀ ದೇವಿ ಬಹಳ ಜಾಗೃತವಿದ್ದಾರೆ ದುಷ್ಟರ ಸಂಹಾರ ಶಿಷ್ಟರ ಪರಿಪಾಲನೆ ಮಾಡುವರು. ಮಂತ್ರವಾದಿಗಳನ್ನು ನಂಬದೆ ದೇವರನ್ನು ಪೂರ್ಣವಾಗಿ ನಂಬಿ ನಡೆದರೆ ಬಂದ ಕಷ್ಟ ಬಯಲಾಗಿ ಜೀವನವು ಸುಖಮಯವಾಗುವದು.

12ನೇ ಶತಮಾನದಲ್ಲಿ ಬಸವಣ್ಣನವರ ತತ್ವ ಕಲಿಯುಗದಲ್ಲಿ ನಡೆಯುತ್ತಿದೆ. ಮಹಾತ್ಮರ ಮಾರ್ಗದರ್ಶನದಲ್ಲಿ ಸಾಗಿದರೆ ಅಂಗ ಲಿಂಗವು ಸಂಗ್ರಾಮವಾಗಿ ಮಾನವ ಜನ್ಮ ಉದ್ದಾರವಾಗುವದು. ಮನಸ್ಸು ಶುದ್ಧವಿದ್ದರೆ ಪರಮಾತ್ಮನ ಆಶೀರ್ವಾದವಿರುತ್ತದೆ. ಖಾದಿ,ಖಾಕಿ,ಕಾಂವಿ ಒಂದಾಗಿ ನಡೆದರೆ ದೇಶ ರಾಮರಾಜ್ಯವಾಗುವದೆಂದು ಹೇಳಿದರು.

ತಹಸೀಲ್ದಾರ ಡಿ.ಜೆ.ಮಹಾತ ಮಾತನಾಡಿ ಧರ್ಮ ಕಡಿಮೆಯಾಗಿ ಪಾಪ ಹೆಚ್ಚಾದಾಗ ಶ್ರೀ ಕೃಷ್ಣ ಪರಮಾತ್ಮ ಅವತರಿಸಿ ಬರುತ್ತೇನೆ ಅಂದ ಹಾಗೆ ಶ್ರೇಷ್ಠ ಮಹಾನ ಪುರುಷ ದಾನೇಶ್ವರ ಶ್ರೀಗಳು ಅವತರಿಸಿ ಬಂದು ದಾಸೋಹ ಧಾರ್ಮಿಕ ಕಾರ್ಯ ಮಾಡುತ್ತಿರುವ ಶ್ರೀಗಳ ಮಹಾನ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಮಾಜದಲ್ಲಿ ನಮಗೆಲ್ಲ ಶ್ರೀಗಳ ಮಾರ್ಗದರ್ಶನ ದಾರಿದೀಪವಾಗಿದೆ ಎಂದರು.

ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ಭಕ್ತರಿಗೆ ಸತ್ಯ ಧರ್ಮದ ಮಾರ್ಗ ಹಿಡಿಸಿ ಸನ್ಮಾರ್ಗ ತೋರಿಸಿ ಪುಣ್ಯದ ಕಾರ್ಯ ಮಾಡಿ ಜಗತ್ತು ಉದ್ದಾರ ಮಾಡುತ್ತಿರುವ ದಾನೇಶ್ವರ ಶ್ರೀಗಳ ಕಾರ್ಯ ಶ್ಲಾಘನಿಯವಾದದ್ದು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ ಪಾರಮಾರ್ಥಿಕ ಸಪ್ತಾಹವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ. ಉಪ ತಹಸೀಲ್ದಾರ್ ಪರಸಪ್ಪ ನಾಯ್ಕ. ಸಿಡಿಪಿಓ ವಾಯ್.ಎಮ್.ಗುಜನಟ್ಟಿ. ಡಾ.ಭಾರತಿ ಕೋಣಿ. ಗಾಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ. ಮುಖಂಡರಾದ ಹಣಮಂತ ತೇರದಾಳ. ಭೀಮಶಿ ಮಗದುಮ. ಸುರೇಶ ಕತ್ತಿ. ಶ್ರೀಶೈಲ ಬಾಗೋಡಿ. ಬಸಪ್ಪ ಹಡಪದ, ಮುಪಯ್ಯ ಹಿಪ್ಪರಗಿ, ಮಾರುತಿ ಮಾವರಕರ, ಶಾಂತಯ್ಯ್ ಹಿರೇಮಠ. ಬಸಪ್ಪ ಮಾಲಗಾರ. ವೀಣಾ ಹೂಗಾರ. ಹಣಮಂತ ಪಾಲಭಾಂವಿ, ಗ್ರಾಮ ಲೇಕ್ಕಾಧಿಕಾರಿ ಸಂಜು ಅಗ್ನೇಪ್ಪಗೋಳ. ಸೇರಿದಂತೆ ಗ್ರಾಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪ್ರಮುಖರು ಪಾಲ್ಗೊಂಡಿದರು.

ಭಕ್ತರು ಅನುಭವ ಹೇಳಿ, ಅನುಭವ ಆಲಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಭಕ್ತಿ ನೃತ್ಯ ನಡೆಯಿತ್ತು. ಮುರಿಗೆಪ್ಪ ಮಾಲಗಾರ ಸ್ವಾಗತಿಸಿದರು. ವಾಯ್.ಆರ್.ಯಲ್ಲಟ್ಟಿ ನಿರೂಪಿಸಿದರು. ಎಸ್.ಎಸ್.ಮನ್ನಾಪುರ ವಂದಿಸಿದರು. ಸಮಾರಂಭಕ್ಕೂ ಮುನ್ನ ಗ್ರಾಮದ ಶ್ರೀ ಬಸವೇಶ್ವರ ಅಶ್ವಾರೂಢ ಮೂರ್ತಿಗೆ ದಾನೇಶ್ವರ ಶ್ರೀಗಳು ಮಾಲಾರ್ಪಣೆ ಮಾಡಿದರು. ದಾನೇಶ್ವರ ಶ್ರೀಗಳನ್ನು ಹಳ್ಳೂರ ಸದ್ಭಕ್ತರು. ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ. ಹಾಗೂ ಮುಖಂಡರು ಸತ್ಕರಿಸಿದರು.

ವರದಿ:- ಪ್ರವೀಣ ಮಾ. ಮಾವರಕರ


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page