ಶುಕ್ರವಾರ , ಸೆಪ್ಟೆಂಬರ್ 22 2023
kn
Breaking News

ಬೆಳಗಾವಿ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಯೋದನಿಗೆ ಸತ್ಕರಿಸಿದ ಗ್ರಾಮಸ್ಥರು

ಹಳ್ಳೂರ: ಉತ್ತರಖಾಂಡ ಡೆಹರಾಡೂಣದ ಮದ್ರಾಸ್ಸ್ ಇಂಜನಿಯರ್ ರಜಿಮೆಂಟ್‍ನ ಎಸಿಪಿ ಹವಾಲ್ದಾರರಾಗಿ ಕಾರ್ಯ ನಿರ್ವಹಿಸಿ ಸೇವೆಯಿಂದ ನಿವೃತ್ತ ಹೊಂದಿರುವ ಸುರೇಶ ಮಾರುತಿ ಬಾಗಡಿ ಅವರಿಗೆ ಗ್ರಾಮಸ್ಥರು ಬಸವೇಶ್ವರ ವೃತ್ತದ ಬಳಿ ಅದ್ದೂರಿಯಾಗಿ ಸ್ವಾಗತ ಮಾಡಿ, ಮಹಿಳೆಯರು ತಿಲಕವನ್ನು ಇಟ್ಟು ಬರಮಾಡಿಕೋಂಡರು. ಸುಮಾರು 20 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಇವರು ರವಿವಾರರಂದು ತಾಯ್ನಾಡು ಹಳ್ಳೂರ ಗ್ರಾಮಕ್ಕೆ ಆಗಮಿಸಿದ್ದರಿಂದ ವಿವಿಧ ವಾಧ್ಯಮೇಳಗಳೊಂದಿಗೆ ಧ್ವನಿಗೂಡಿಸಿ ಜೈ ಜವಾನ್, ಜೈ ಕಿಸಾನ್ ಎಂಬ ಜಯ …

Read More »

ವಿಶ್ವ ಮಣ್ಣು ಆರೋಗ್ಯ ದಿನಾಚಾರಣೆಯ ಸಮಾರಂಭ

ಹಳ್ಳೂರ: ಮಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ, ಮಣ್ಣಿನ ಸವಕಳಿಯನ್ನು ತಪ್ಪಿಸುವ ಮಣ್ಣನ್ನು ಲವಣಯುಕ್ತಗೋಳಿಸುವುದನ್ನು ಬಿಡುವುದು ಸೇರಿದಂತೆ ಮಣ್ಣು ಸಂರಕ್ಷಣೆಯ ಮಹತ್ವದ ತಿಳುವಳಿಕೆ ದಿವಸವೆಂದು ಮುಖಂಡ ಹಣಮಂತ ತೇರದಾಳ ಹೇಳಿದ್ದರು. ಸ್ಥಳೀಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ರವಿವಾರರಂದು ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚಾರಣೆಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಮಣ್ಣಿನ ಉತ್ಪಾದಕತೆ, ಆರೋಗ್ಯ, ಮಣ್ಣು ಪರೀಕ್ಷೆಯ ಮಹತ್ವವನ್ನು ಹಾಗೂ ರಸಗೊಬ್ಬರಗಳ ಮಾಹಿತಿಯನ್ನು ರೈತರಿಗೆ …

Read More »

ಪ್ರಥಮ ಪ್ರಾಶಸ್ತ್ಯ ಮತಗಳನ್ನು ನೀಡಿ : ಲಖನ್ ಜಾರಕಿಹೊಳಿ

ಅಥಣಿ : ಪ್ರಥಮ ಪ್ರಾಶಸ್ತ್ಯ ಮತಗಳನ್ನು ನೀಡಿ ನನ್ನನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡುವಂತೆ ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು. ಇಲ್ಲಿಯ ಹೊರವಲಯದಲ್ಲಿರುವ ನೂರಾಣಿ ನಾಲ್ಬಂದ್ ಕಲ್ಯಾಣ ಮಂಟಪದಲ್ಲಿ ಗುರುವಾರದಂದು ಜರುಗಿದ ಅಥಣಿ-ಕಾಗವಾಡ ಮತಕ್ಷೇತ್ರಗಳ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತಗಳ ಬಲವರ್ಧನೆಗಾಗಿ ಯಾವುದೇ ಪಕ್ಷ ಸೇರದೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬೆಂಬಲಿಸಿ ಆಶೀರ್ವಾದ ಮಾಡುವಂತೆ ಕೋರಿದರು. …

Read More »

ಭಾರತೀಯ ಸಂವಿಧಾನ ಸಮರ್ಪಣಾ ದಿವಸ ಆಚರಿಸಲಾಯಿತ್ತು

ಹಳ್ಳೂರ: ನವೆಂಬರ 26 ಭಾರತ ದೇಶಕ್ಕೆ ಮಹತ್ವದ ದಿನ ಗೌರವ ಕೋಡುವ ದಿನವಾಗಿದೆ. ಈ ದಿವಸ ಯಾರು ಮರೆಯಲು ಸಾಧ್ಯವಿಲ್ಲ, ಭಾರತದ ಸಂವಿಧಾನ ಜಗತ್ತಿನ ಅತಿದೊಡ್ಡ ಸಂವಿಧಾನ, 1949 ರ ನವೆಂಬರ 26 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತ್ತು. ಇದರ ಅಂಗವಾಗಿ ನಾವು ಸಂವಿಧಾನ ದಿನವನ್ನು ಆಚರಿಸುತ್ತಿದ್ದೇವೆ ಎಂದು ಪ.ಜಾತಿ,ಪ.ಪಂಗಡಗಳ ಬಲವರ್ಧನ ಮತ್ತು ಮೇಲ್ವಿಚಾರಣಾ ಸಮಿತಿಯ ಜಿಲ್ಲಾಧ್ಯಕ್ಷ ಮಾರುತಿ ನಾ. ಮಾವರಕರ ಹೇಳಿದರು. ಸ್ಥಳೀಯ ಪ.ಜಾತಿ,ಪ.ಪಂಗಡಗಳ ಬಲವರ್ಧನ ಮತ್ತು ಮೇಲ್ವಿಚಾರಣಾ ಸಮಿತಿಯ …

Read More »

ಸಂಗಮೇಶ ಹೂಗಾರಗೆ ಪಿಎಚ್.ಡಿ. ಪದವಿ

ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಸಂಗಮೇಶ ಶಿವಪ್ಪ ಹೂಗಾರ ಇವರು ‘ಉತ್ತರ ಕರ್ನಾಟಕದ ಕಂಪನಿ ನಾಟಕಗಳಲ್ಲಿ ಸಮಾನತೆಯ ಆಶಯ’ ವಿಷಯದಲ್ಲಿ ಮಂಡಿಸಿರುವ ಪ್ರಬಂಧವನ್ನು ಮನ್ನಿಸಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿಯನ್ನು ಪ್ರಕಟಿಸಿದೆ. ಡಾ. ಸಂಗಮನಾಥ ಲೋಕಾಪುರ ಅವರು ಹೂಗಾರ ಅವರ ಸಂಶೋಧನೆಗೆ ಮಾರ್ಗದರ್ಶನವನ್ನು ನೀಡಿದ್ದರು. ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಹಾಗೂ ಆಡಳಿತ ಮಂಡಳಿಯ …

Read More »

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ದಾನ, ಧರ್ಮ, ಸಮಾಜ ಪ್ರೀತಿಗೆ ಶ್ರೀಶೈಲ್ ಜಗದ್ಗುರು ಪೀಠ ಹರ್ಷ – ಶ್ರೀಶೈಲ್ ಮಹಾಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು

ಮೂಡಲಗಿ: ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದಾನ ಮತ್ತು ಧರ್ಮಗಳಿಂದ ನಡೆಯುವ ‘ಸಾಹುಕಾರ್’ ಎಂದು ಈ ನಾಡಿನಲ್ಲಿ ಗುರುತಿಸಿಕೊಂಡಿರುವ ಅಪರೂಪದ ರಾಜಕಾರಣಿಯಾಗಿದ್ದಾರೆ ಎಂದು ಶ್ರೀಶೈಲ್ ಮಹಾಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಶ್ಲಾಘನೆ ವ್ಯಕ್ತಪಡಿಸಿದರು. ಭಾನುವಾರ ಸಂಜೆ ಮೂಡಲಗಿ ತಾಲ್ಲೂಕಿನ ಮುನ್ಯಾಳ-ರಂಗಾಪುರದ ಸದಾಶಿವಯೋಗೀಶ್ವರ ಮಠದ ಹಣಮಂತ ದೇವರ ಮಂದಿರ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಅಶ್ವಾರೂಢ ಗುರುಬಸವರಾಜ ಅಜ್ಜನವರ ಸರ್ಕಲ್‍ದ ಉದ್ಘಾಟನಾ ಸಮಾರಂಭ ಹಾಗೂ …

Read More »

ದೇಶಿಯ ಗೋ ತಳಿಗಳನ್ನು ಉಳಿಸಿ: ಈರಣ್ಣ ಕಡಾಡಿ

ಮೂಡಲಗಿ: ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ಗೋವುಗಳಿಗೆ ವಿಶಿಷ್ಠವಾದ ಸ್ಥಾನವಿದೆ, ಗ್ರಾಮೀಣ ಪ್ರದೇಶದಲ್ಲಿ ಗೋವುಗಳು ರೈತರ ಜೀವನಾಧಾರವಾಗಿದೆ. ದೇಶಿಯ ಗೋ ತಳಿಗಳನ್ನು ಉಳಿಸಿ ಬೆಳೆಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಶುಕ್ರವಾರ ನ.05 ರಂದು ಕಲ್ಲೋಳಿ ಪಟ್ಟಣದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಮಾರುತಿ ದೇವರ ದೇವಸ್ಥಾನದಲ್ಲಿ ನಡೆದ ಗೋಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋ ಪೂಜೆಯನ್ನು ನೆರವೇರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು …

Read More »

ಹೈಮಾಸ್ಟ್ ಟವರ್ ಉದ್ಘಾಟಿಸಿದ: ರಾಹುಲ್ ಜಾರಕಿಹೊಳಿ

ನಾಗನೂರ: ಇಂದು ಗ್ರಾಮದ ಮನ್ನಿಕೇರಿ ಪೆಟ್ರೋಲಿಯಂ ಅಲ್ಲಿ  ಶ್ರೀ ರಾಹುಲ ಸತೀಶ ಜಾರಕಿಹೊಳಿ ಹೈಮಾಸ್ಟ್ ಟವರ್ ಉದ್ಘಾಟನೆ ಮತ್ತು ಮನ್ನಿಕೇರಿ ಪೆಟ್ರೋಲಿಯಂ ಉತ್ಸವದ ಧಮಾಕಾ ಬಹುಮಾನ ವಿತರಣೆ ಕಾರ್ಯಕ್ರಮ ಚಾಲನೆ ನೀಡಿದರು. ಈ ಸಂದರ್ಭದಲ್ಲಿ. ಶ್ರೀ ಬಸಗೌಡ ಪಾಟೀಲ. ಜೆ.ಜಿ.ಕೋ.ಹಾಸ್ಪಿಟಲ್. ನಿರ್ದೇಶಕರು ಘಟಪ್ರಭಾ. ಮಲ್ಲಿಕಾರ್ಜುನ ಕಬ್ಬುರ. ಮರೆಪ್ಪ. ಮರಪಾಗೋಳ. ಅದಿವಪ್ಪ ಹಾದಿಮನಿ. ಅಧ್ಯಕ್ಷರು.ಗ್ರಾ.ಪಂ ವಡೆರಹಟ್ಟಿ. ಪರಸಪ್ಪ ಸಾರಪುರ. ದಿ. ಘಟಪ್ರಭಾ ಶುಗರ್ ನಿರ್ದೇಶಕರು. ಚಂದ್ರಕಾಂತ ಮೋಟೆಪ್ಪಗೋಳ. ಮುರಳ್ಳಿ ಬಡಿಗೇರ ದಳವಾಯಿ. …

Read More »

ಪುನೀತ್ ರಾಜಕುಮಾರ ನಿಧನಕ್ಕೆ – ಸಂಸ್ಥಾಪಕ ಮಾರುತಿ ಸವಳೇಕರ ಸಂತಾಪ

ಮೂಡಲಗಿ: ಓರ್ವ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಉತ್ತಮ ನಟನನ್ನು ನಾಡು ಕಳೆದುಕೊಂಡಿದೆ ಎಂದು ಸರ್ವವಾಣಿ ಪತ್ರಿಕೆ ಸಂಸ್ಥಾಪಕ, ಮೂಡಲಗಿ ತಾಲೂಕಾ ವಾರ ಪತ್ರಿಕಾ ಸಂಪಾದಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಮಾರುತಿ ಸವಳೇಕರ ಸಂತಾಪ ವ್ಯಕ್ತಪಡಿಸಿದರು. ಪತ್ರಿಕಾ ಹೇಳಿಕೆ ನೀಡಿದ ಸಂಸ್ಥಾಪಕ ಮಾರುತಿ ಸವಳೇಕರ ಅವರು ಪುನೀತ ರಾಜಕುಮಾರ ಬಾಲಪ್ರತಿಭೆಯಾಗಿ ಗುರುತಿಸಿಕೊಂಡು ಕನ್ನಡ ನಾಡು, ನುಡಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಅದ್ಭುತವಾದ ನಟ ಬಾರದ ಲೋಕಕ್ಕೆ ಹೋಗಿರುವುದು ನೋವಿನ ಸಂಗತಿ ಅವರ …

Read More »

ಬೆಳಗಾವಿಯಲ್ಲಿ ಎನ್‍ಎಂಪಿ ಘಟಕ ಸ್ಥಾಪನೆಗೆ ಪ್ರಯತ್ನ : ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ಬೆಳಗಾವಿಯಲ್ಲಿ ನಂದಿನಿ ಮಿಲ್ಕ್ ಪ್ರೋಡಕ್ಟ್ (ಎನ್‍ಎಂಪಿ) ಘಟಕ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶುಕ್ರವಾರದಂದು ಬೆಳಗಾವಿ ಹಾಲು ಒಕ್ಕೂಟದ ಆವರಣದಲ್ಲಿ ನಡೆದ ಹಾಲು ಉತ್ಪಾದಕರ ರೈತರ ಮಕ್ಕಳಿಗೆ 4.50 ಕೋಟಿ ರೂ. ವೆಚ್ಚದ ವಸತಿ ನಿಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಎನ್‍ಎಂಪಿ ಘಟಕ ಸ್ಥಾಪನೆಗೆ ಬೆಳಗಾವಿ ಮಹಾ ನಗರದಲ್ಲಿ 40 ರಿಂದ 50 …

Read More »

You cannot copy content of this page